ಜನಪ್ರಿಯ ಸ್ಯಾಮ್‌ಸಂಗ್‌ ಮೊಬೈಲ್‌ ಕಂಪನಿಯು ಹೊಸದಾಗಿ Samsung Galaxy F70 Pro 5G ಸ್ಮಾರ್ಟ್‌ಫೋನ್‌ ಅನ್ನು ಇಂದು (ಆಗಷ್ಟ್‌ 3 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಮೊಬೈಲ್‌ ಬೆಲೆ, ಸೇಲ್‌ ಡೇಟ್ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. Samsung Galaxy F70 Pro 5G ಬೆಲೆ ಹಾಗೂ ಲಭ್ಯತೆಸ್ಯಾಮ್‌ಸಂಗ್ ಕಂಪನಿಯ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. Samsung Galaxy F70 Pro 5G launchedಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಫೋನಿನ ಫೀಚರ್ಸ್‌ ಹೀಗಿವೆಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಫೋನ್‌ 6.7 ಇಂಚಿನ FHD+ ಇನ್ಫಿನಿಟಿ-O ಸೂಪರ್ AMOLED ಡಿಸ್‌ಪ್ಲೇ ಅನ್ನು ಹೊಂದಿವೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.