ಈಗ ಕೆಲವೇ ಸೆಕೆಂಡುಗಳಲ್ಲಿ ಎಐ ಟೂಲ್‌ಗಳು ಉತ್ತರ ನೀಡುತ್ತವೆ. ಪಾಠ ಅರ್ಥಮಾಡಿಕೊಳ್ಳುವುದು, ನೋಟ್ಸ್ ತಯಾರಿಸುವುದು, ಪ್ರೆಸೆಂಟೇಶನ್ ಮಾಡುವುದು, ಭಾಷಾಂತರ, ಕೋಡಿಂಗ್ ಮತ್ತು ಪರೀಕ್ಷೆಗೆ ತಯಾರಿ ಒಳಗೊಂಡಂತೆ ಇವೆಲ್ಲವೂ ಈಗ ಎಐ ಸಹಾಯದಿಂದ ಇನ್ನಷ್ಟು ಸುಲಭವಾಗಿದೆ. ವಿದ್ಯಾರ್ಥಿಗಳು ಬಳಸಲೇಬೇಕಾದ ಕೆಲವು ಪ್ರಮುಖ ಎಐ ಟೂಲ್‌ಗಳ ಪರಿಚಯ ಇಲ್ಲಿದೆ. Perplexity ಎಐGoogle Search‌ ಗೆ ಉತ್ತಮ ಪರ್ಯಾಯವಾಗಿರುವ Perplexity ಎಐ ನೇರ ಉತ್ತರಗಳ ಜೊತೆಗೆ ಮೂಲ ಮಾಹಿತಿಯ ಲಿಂಕ್‌ಗಳನ್ನೂ ನೀಡುತ್ತದೆ. ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಇದು ಉತ್ತಮ ಸಾಧನ.